Wednesday, April 17, 2019

ಗಾಂಧಿ ಎಂಬ ಹೆಸರಿನವರಿಂದ ನಮ್ಮ ಜನ ಪದೇ ಪದೇ ಮೋಸ ಹೋಗುತ್ತಿರುವುದೇಕೆ ??

ಗಾಂಧಿ ಎಂಬ ನಾಮಬಲವಿದ್ದರೆ ಸಾಕೋ!

ಹದಿನೈದು ವರ್ಷಗಳ ಹಿಂದಿನ ಮಾತು. ಭಾರತ ಪ್ರಕಾಶಿಸುತ್ತಿದೆ ಎಂಬ ಘೋಷವಾಕ್ಯದೊಂದಿಗೆ ಚುನಾವಣೆಗಿಳಿದಿದ್ದ ಬಿಜೆಪಿ ಸೋಲುಂಡು, ಕಾಂಗ್ರೆಸ್ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ ಅದಕ್ಕೆ ತಾನಾಗಿ ಅಧಿಕಾರದ ಗದ್ದುಗೆಗೇರುವಷ್ಟು ಬಹುಮತದ ಬೆಂಬಲ ಇರಲಿಲ್ಲ. ಸುತ್ತಮುತ್ತಲಿನ ಹತ್ತಾರು ಪಕ್ಷಗಳ ಬೆಂಬಲದೊಂದಿಗೆ ಆಡಳಿತ ಪಕ್ಷವಾಗುವ ಇಕ್ಕಟ್ಟಿಗೆ ಅದು ಸಿಲುಕಿತ್ತು. ಆಗ ಕಾಂಗ್ರೆಸ್ ಪಕ್ಷದ ಎಲ್ಲ ಸದಸ್ಯರು ಸೋನಿಯಾ ಘಂಡಿ ಈ ದೇಶದ ಪ್ರಧಾನಮಂತ್ರಿಯ ಹುದ್ದೆ ವಹಿಸಿಕೊಳ್ಳಬೇಕೆಂದು ಒಕ್ಕೊರಲಿನ ಬೇಡಿಕೆ ಮುಂದಿಟ್ಟರು. ವೇದಿಕೆಯಲ್ಲಿ ಬಿಮ್ಮನೆ ಕೂತ ಸೋನಿಯಾ ಮತ್ತು ಆಕೆಯನ್ನು ಫಲ-ಪತ್ರ-ಪುಷ್ಪ-ಸ್ತೋತ್ರಗಳಿಂದ ಅರ್ಚಿಸಿ ಪೂಜಿಸಿ ಕೊಂಡಾಡಿ ಅಟ್ಟಕ್ಕೇರಿಸಿ ದಯನೀಯವಾಗಿ ನಿವೇದಿಸಿಕೊಳ್ಳುತ್ತಿದ್ದ ಕಾಂಗೈ ಸದಸ್ಯರು - ಈ ನಾಟಕವನ್ನು ದೂರದರ್ಶನದ ಕೃಪೆಯಿಂದ ದೇಶದ ನೂರು ಕೋಟಿ ಪ್ರಜೆಗಳು ನೋಡಿ ಕೃತಾರ್ಥರಾದರು. ಕಾಂಗ್ರೆಸ್‍ನ ಸದಸ್ಯರು ಆ ರಾತ್ರಿ ಅದೆಷ್ಟು ಹತಾಶರಾಗಿದ್ದರೆಂದರೆ ವೇದಿಕೆಯನ್ನೇರಿ ಕಣ್ಣೀರು ಹಾಕುತ್ತಿದ್ದರು. ಘಂಡಿ ಕುಟುಂಬ ಈ ದೇಶವನ್ನು ಸಂಕಷ್ಟಗಳ ಸಮಯದಲ್ಲಿ ಹೇಗೆ ಅಟ್ಲಾಸ್‍ನಂತೆ ಎತ್ತಿ ಹಿಡಿದಿದೆ ಎಂದು ಉದಾಹರಣೆ ಸಮೇತ ವಿವರಿಸುತ್ತಿದ್ದರು. ಕೆಲವರು ಸೋನಿಯಾರ ದಿವ್ಯಪಾದಗಳಲ್ಲಿ ಉರುಳಾಡಲು ಕೂಡ ತಯಾರಾಗಿಬಿಟ್ಟಿದ್ದರು. ಬಿಡಿ! ವಾಜಪೇಯಿಯವರ ಸರಕಾರವನ್ನು ಕೆಳಗಿಳಿಸಿ ಕಾಂಗ್ರೆಸ್ಸಿನ ಕೈಗೆ ಅಧಿಕಾರ ಕೊಟ್ಟ ಶತಮೂರ್ಖ ಭಾರತೀಯ ಇದನ್ನಲ್ಲದೆ ಇನ್ನೇನನ್ನು ನೋಡಬೇಕಿತ್ತು?

Monday, April 15, 2019

ಮತ್ತೊಮ್ಮೆ ಮೋದಿ, ಮಗದೊಮ್ಮೆ ಮೋದಿ ಯಾಕೆ ಅವಶ್ಯಕ ?

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭುಗಳು. ಕಳೆದ ಐದು ವರ್ಷಗಳಿಂದ ಕೇಂದ್ರ ಸರ್ಕಾರದ ಆಡಳಿತದ ಚುಕ್ಕಾಣಿ ಹಿಡಿದಿದ್ದ ನರೇಂದ್ರ ಮೋದಿಯವರ ಆಡಳಿತ ಅವಧಿಯು ಮುಕ್ತಾಯವಾಗಿದೆ.ಮುಂದಿನ ಐದು ವರ್ಷಗಳ ಅವಧಿಗೆ ಚುನಾವಣೆಯ ಮೂಲಕ ಪ್ರಜಾಪ್ರತಿನಿಧಿಗಳ ಆಯ್ಕೆಗಾಗಿ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದೆ.
ನಾವೆಲ್ಲಾ ಗಮನಿಸಬೇಕಾದ ಅಂಶವೇನೆಂದರೆ ಈ ಬಾರಿ ಜನ ಚುನಾವಣೆ ಬಗ್ಗೆ ವಿಭಿನ್ನ ಧ್ರಷ್ಟಿಕೋನದಿಂದ ಆಲೋಚಿಸಲಾರಂಬಿಸಿದ್ದಾರೆ.
ಲಕ್ಷಾಂತರ ಮಂದಿ ಹೊಸ ಮತದಾರರು ಉತ್ಸಾಹದಿಂದ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಂಡು ತಮ್ಮ ಹಕ್ಕನ್ನು ಚಲಾಯಿಸಲು ಕಾತರದಿಂದ ಕಾಯುತ್ತಿದ್ದಾರೆ.
ದೂರದ ವಿದೇಶಗಳಲ್ಲಿ,ಹೊರ ರಾಜ್ಯಗಳಲ್ಲಿ ದುಡಿಯುತ್ತಿರುವ ಲಕ್ಷಾಂತರ ಮಂದಿ ಈ ಬಾರಿ ಮತದಾನ ಮಾಡಲು ತಮ್ಮ ಊರಿಗೆ ಬರಲಿದ್ದಾರೆ.
ಹಿಂದೆಂದೂ ಕಾಣದ ಈ ಉತ್ಸಾಹ ಮೂಡಲು ಕಾರಣಗಳೇನು...? ಎಂದು ಆಲೋಚಿಸಿದಾಗ ಕಾರಣ ಸ್ಪಷ್ಟವಾಗಿದೆ...

Wednesday, April 10, 2019

ಟಿಪ್ಪುಕೊಂದ ಮಂಡ್ಯ ಸ್ವಾಭಿಮಾನಿ ಗೌಡರ ವೀರಚರಿತೆ

 ಟಿಪ್ಪು ಕೊಂದ ಮಂಡ್ಯಗೌಡರು ಒಂದು ವಿಶ್ಲೇಷಣೆ 
ಮೊದಲು ಮೈಸೂರು ಜಿಲ್ಲೆಯ  ಭಾಗವಾಗಿದ್ದ ಮಂಡ್ಯ ಸ್ವತಂತ್ರ  ಜಿಲ್ಲೆಯಾಗಿ ರೂಪುಗೊಂಡು 76 ಸಂವತ್ಸರಗಳನ್ನು ಕಳೆದಿದೆ.  ಅಖಂಡ ಮೈಸೂರು ರಾಜ್ಯಕ್ಕೆ ಶ್ರೀರಂಗಪಟ್ಟಣ ಮೂಲತಃ ರಾಜಧಾನಿಯಾಗಿತ್ತು .ಇಡೀ ಕರ್ನಾಟಕ ರಾಜ್ಯದಲ್ಲಿ  ನೂರು ಪ್ರತಿಶತ  ಅಪ್ಪಟ ಕನ್ನಡತನದ ಗ್ರಾಮೀಣ ಸೊಗಡಿನ ಜಿಲ್ಲೆ ಎಂದರೆ  ಮಂಡ್ಯ.  ಇಲ್ಲಿನ ಜನರ  ಕಸುಬು ಬೇಸಾಯ ಆದುದ್ದರಿಂದಲೇ  ಒಕ್ಕಲುತನದ ರೈತಾಪಿ ಜೀವನ ಶೈಲಿ ಮಂಡ್ಯದ್ದು  ,ಇಲ್ಲಿನ  ಜಾನಪದ ಸಂಸ್ಕೃತಿ ಶ್ರೀಮಂತವಾಗಿದ್ದು ಜೀವಂತವಾಗಿಯೂ ಇದೆ ಇಲ್ಲಿನ  ಧಾರ್ಮಿಕ ಜೀವನ ವಿಶಿಷ್ಟವಾಗಿ ರೂಪುಗೊಂಡಿದೆ   ಪ್ರತಿಯೊಂದು  ಗ್ರಾಮದಲ್ಲೂ ಗ್ರಾಮದೇವತೆ ಆರಾಧನೆಯ ವಾಡಿಕೆ ಇದೆ  ಮಂಡ್ಯದ ಜನಪ್ರಿಯ ಗ್ರಾಮದೇವತೆ "ಪಟ್ಟಲದಮ್ಮನ"ದೇವಾಲಯ  ಇಡೀ ಗ್ರಾಮದ ಶ್ರದ್ದಾ ಭಕ್ತಿಯ ಕೇಂದ್ರವಾಗಿದೆ ಇಲ್ಲಿನ ಸಾಮಾಜಿಕ ರಚನೆಯಲ್ಲಿ  ಊರು, ಕೇರಿ, ತೆಂಡೆಯ ಪರಿಕಲ್ಪನೆ ಇದೆ ತೆಂಡೆ ಎಂದರೆ ಒಂದೇ ವಂಶ, ಕುಲ,ಮನೆತನವೆಂದರ್ಥ  ಪ್ರತಿಯೊಂದು ಅಣ್ಣತಮಕ್ಕೆ  ತೆಂಡೆಗೂ ಹಿರಿಯರೊಬ್ಬರು ಯಜಮಾನರು ಇರುತ್ತಾರೆ ಅವರು ಊರಿನ ಸಾಮಾಜಿಕ, ಧಾರ್ಮಿಕ ಕಾರ್ಯಕಲಾಪಗಳ  ಆಡಳಿತವನ್ನು ನಿರ್ವಹಿಸುತ್ತಾರೆ ಎಪ್ಪತ್ತು ವರ್ಷಗಳ ಹಿಂದೆ  ಊರಿನ ಆಡಳಿತ ನ್ಯಾಯಪಂಚಾಯಿತಿ ಎಲ್ಲವನ್ನು  ಯಜಮಾನರುಗಳೇ ನಿರ್ವಹಿಸುತ್ತಿದ್ದರು ಗ್ರಾಮಪಂಚಾಯಿತಿ,ಪೊಲೀಸ್ ಠಾಣೆ ,ಕೋರ್ಟ್ ವ್ಯವಸ್ಥೆ  ಬಂದ  ನಂತರ ಯಜಮಾನರ ಮಹತ್ವ ಕಡಿಮೆಯಾಗಿದೆ.  ಪ್ರತಿಯೊಂದು  ಮನೆತನ,ವಂಶ ,ತೆಂಡೆ ,ಕುಲಕ್ಕೂ ಅವರದೇ ಆದ ಕುಲದೇವತೆಗಳಿದ್ದಾರೆ ಈ  ಕುಲದೇವತೆಯ ಆರಾಧನೆಯ ಪರಂಪರೆ ಅನಾದಿ ಕಾಲದಿಂದಲ್ಲೂ ನಡೆದುಕೊಂಡು  ಬಂದಿದೆ ಅಲ್ಲದೆ ವಾರದ ನಿರ್ದಿಷ್ಟ ದಿನವನ್ನು ದೇವರ ಆರಾಧನೆಯ ದಿನವೆಂದು ಪರಿಗಣಿಸಿ  ಆ ದಿನದಂದು  ಮನೆಯನ್ನು ಗುಡಿಸಿ ತಾರಿಸಿ ಕಟ್ಟುನಿಟ್ಟಿನ ಮಡಿಯೊಂದಿಗೆ  ವಾರ ಒಪ್ಪತ್ತಿನ ಆಚರಣೆಯ ಸಂಪ್ರದಾಯವಿದೆ ಆ ಸಂದರ್ಭದಲ್ಲಿ   ದಾಸಯ್ಯ,ಜೋಗಯ್ಯನವರನ್ನು ಕರೆಸಿ  ಜಾಗಟೆಯ ಸದ್ದು , ಶಂಖ ಸಿಂಗಳತದ  ನಾದಗಳೊಂದಿಗೆ ದೂಪ ಹಾಕಿಸಲಾಗುತ್ತದೆ  ಅಲ್ಲದೆ "ಎಡೆಯ"  ಬಾಡೂಟದ ಸಂಭ್ರಮವು ಇರುತ್ತದೆ  ಇವೆಲ್ಲ ಮಂಡ್ಯ ಜನರ  ನೆನ್ನೆ ಮೊನ್ನೆಯ ಸ್ವಭಾವಗಳಲ್ಲ  ತಲೆತಲಾಂತರದಿಂದ ರಕ್ತಗತವಾಗಿ ಬಂದಿರುವ ಕನ್ನಡತನದ ಸ್ವಭಾವಗಳಾಗಿವೆ

Tuesday, April 9, 2019

ಹಳೇಬೀಡು - ಒಂದು ಮುನ್ನೋಟ

ಜಗತ್ತಿನ ಯಾವ ಮೂಲೆಗೆ ಹೋದರು ಇಂತಹ ಶಿಲ್ಪ ಕಲಾ ವೈಭವ ನೋಡಲು ಸಿಗದು  ಕನ್ನಡಿಗರ  ಹೆಮ್ಮೆಯ ಹಳೆ ಬೀಡು...  ಶಿವತಾಂಡವದಿಂದ ಹಿಡಿದು    ರಾಮಾಯಣ ಮಹಾಭಾರತ ದ ದ್ರಶ್ಯ ಗಳು ..ನರ್ತಕಿ ಯರು ಸಂಗೀತ ವಾದ್ಯಗಳು  ಪದಾತಿ ಸಾಲುಗಳು ಆನೆ ಕುದುರೆ  ಎಷ್ಟೇಲ್ಲವೂ ನೋಡಲು ಕಣ್ಣಿಗೆ ಹಬ್ಬ..‌‌‌..ಬೀಡು ಹಳೆಯದಾದರೂ ಇಲ್ಲಿಯ ಶಿಲ್ಪ ಕಲೆಯ ವೈಭವ ನಿತ್ಯ ನೂತನ... ನೋಡಬನ್ನಿ ಒಮ್ಮೆ ಹಳೆಬೀಡು..‌

 ಸುಮಾರು ಕ್ರಿ.ಶ. 1000  ದಿಂದ ಕ್ರಿ.ಶ. 1346 ರ ವರೆಗೆ ದಕ್ಷಿಣ ಭಾರತದ ಕೆಲ ಭಾಗಗಳನ್ನು ಆಳಿದ ರಾಜವಂಶ. ಹೊಯ್ಸಳ ಸಾಮ್ರಾಜ್ಯದ ರಾಜಧಾನಿ ದ್ವಾರಸಮುದ್ರ (ಇಂದಿನ ಹಳೇಬೀಡು), ಹಾಸನ ಜಿಲ್ಲೆಯಲ್ಲಿದೆ. ಜಾನಪದ ನಂಬಿಕೆಯಂತೆ, ಹೊಯ್ಸಳ ಎಂಬ ಹೆಸರು ಈ ವಂಶದ ಸಂಸ್ಥಾಪಕ ಸಳನಿಂದ ಉತ್ಪತ್ತಿಯಾದದ್ದು ಚಾರಿತ್ರಿಕವಾಗಿ ಈ ಸಂಸ್ಥಾಪಕನ ಹೆಸರು ನೃಪಕಾಮ ಎಂದು ಊಹಿಸಲಾಗಿದೆ.

ಮೋದಿ-ಸಾವಿರ ಸಾಧನೆಗಳ ಸರದಾರ


ಮೋದಿ ಏನು ಮಾಡಿದ್ದಾನೆ ಎಂದು ಯಾರಾದರೂ ಕೇಳಿದರೆ ಅವರನ್ನು ಎಳೆದು ಪಕ್ಕಕ್ಕೆ ಕೂರಿಸಿಕೊಂಡು ಮೋದಿ ಏನೇನು

ಮಾಡಿದ ಎನ್ನುವ ಈ ಪಟ್ಟಿ ಜೋರಾಗಿ ಓದಲು ಹೇಳಿ. ಇದನ್ನು ಪೂರ್ತಿ ಓದಿ ಮುಗಿಸುವಷ್ಟರಲ್ಲಿ ಚುನಾವಣೆಯ ದಿನವೇ ಬಂದು, ಮನೆಗೆ ಹೋಗೋ ಬದಲು ನೇರವಾಗಿ ಮತಗಟ್ಟೆಗೇ ಹೋಗಿಬಿಡಬೇಕಾಗಬಹುದು. ಹಾಗೆಯೇ ಯಾರಾದರೂ ವಾಟ್ಸಾಪ್ ನಲ್ಲಿ ಅಥವಾ ಫೇಸ್ ಬುಕ್ ನಲ್ಲಿ ಮೋದಿ ಏನು ಮಾಡಿದ್ದಾನೆ ಎಂದು ಕೇಳಿದ್ದು ನೋಡಿದರೆ ಈ ಪಟ್ಟಿಯನ್ನೇ ಯಥಾವತ್ತು ಪೇಸ್ಟ್ ಮಾಡಿ ಚರ್ಚೆಗೆ ಕರೆಯಿರಿ.ಇವಿಷ್ಟೂ ಸಾಧನೆಗಳು ಸಾಲದು ಎಂದೇನಾದರೂ ಅಂದರೆ ಇನ್ನೂ ನೂರಾರು ಸಾಧನೆಗಳ ಪಟ್ಟಿ ಕೊಡಲು ನಾವಂತೂ ಸಿದ್ಧ. ಸುಮ್ಮ ಸುಮ್ಮನೆ ಯಾರು ಯಾರಿಗೂ ಭಕ್ತರಾಗಲ್ಲ, ನೆನಪಿರಲಿ.

#ಸಾವಿರ_ಸಾಧನೆಯ_ಸರದಾರ 
*****************************
Ø ಹಿಂದೂ ದೇವಾಲಯಗಳ ಬಗ್ಗೆ ಟೀಕಿಸುತ್ತಿದ್ದವರೇ ಹಿಂದೂ ದೇವಾಲಯಗಳಿಗೆ ನಿತ್ಯ ಅಲೆದಾಡುವಂತೆ ಮಾಡಿದ
Ø ಗಂಗೆಯ ಪಾವಿತ್ರ್ಯತೆಯನ್ನು ಪ್ರಶ್ನಿಸಿದವರಿಗೆ ಗಂಗೆಯ ನೀರು ಕುಡಿಸಿದ
Ø ಶ್ರೀ ರಾಮನ ಅಸ್ತಿತ್ವವನ್ನು ಪ್ರಶ್ನಿಸಿದವರನ್ನೇ ರಾಮನ ಭಾವಚಿತ್ರದೊಂದಿಗೆ ಮೆರವಣಿಗೆ ಮಾಡಿಸಿದ
Ø ತೋರಿಕೆಗಾಗಿ ಅನ್ಯ ಧರ್ಮೀಯರ ವೇಷ ಹಾಕುವುದನ್ನು ನಯವಾಗಿ ತಿರಸ್ಕರಿಸಿದ
Ø ಚುನಾವಣಾ ಸಮಯದಲ್ಲಿ ಸೆಕ್ಯುಲರ್ ಪಕ್ಷಗಳ ಅನ್ಯ ಧರ್ಮೀಯರ ಅನಗತ್ಯ ಓಲೈಕೆ ಕಡೆಗಾಣಿಸಿದ

Thursday, March 21, 2019

ಇಂಡಿಯ ಎಮರ್ಜೆನ್ಸಿ ಆ ಕರಾಳ ದಿನಗಳು

1975ರ ಜೂನ್ 26ರಿಂದ 1977ರ ಮಾರ್ಚ್ 21 = 21 ತಿಂಗಳ ಅವಧಿ = ಸ್ವತಂತ್ರ ಭಾರತ ಇತಿಹಾಸದ ಪುಟಗಳಲ್ಲಿ ಅಳಿಸಲಾಗದ ಕರಾಳ ದಿನಗಳು! 39 ವರ್ಷಗಳ ಹಿಂದೆ ದೇಶವನ್ನು ಅಲ್ಲಾಡಿಸಿದ ರಾಷ್ಟ್ರೀಯ ದುರಂತ. ಸಂವಿಧಾನಬದ್ಧವಾಗಿ ಭಾರತೀಯ ಪೌರರಿಗೆ ನೀಡಲಾಗಿದ್ದ ಸ್ವಾತಂತ್ರ್ಯವನ್ನು ಕಸಿದುಕೊಂಡು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಹೇರಿದ ತುರ್ತುಪರಿಸ್ಥಿತಿಯ ಕರಾಳ ದಿನಗಳವು. ಭಾರತದ ಇತಿಹಾಸದುದ್ದಕ್ಕೂ ಕಪ್ಪುಚುಕ್ಕೆಯಾಗಿ ಉಳಿಯುವ ಪ್ರಧಾನಿ ಇಂದಿರಾ ಗಾಂಧಿ ಅವರ ಅತ್ಯಂತ ವಿವಾದಾತ್ಮಕ ಆದೇಶ ಅದು.
ಅದು ದೇಶದ ಪ್ರಜಾಪ್ರಭುತ್ವಕ್ಕೆ ಎರಗಿದ್ದ ಮೊದಲ ಮತ್ತು ಸದ್ಯಕ್ಕೆ ಕೊನೆಯ ಗಂಡಾಂತರ, ಇಂದಿರಾಗಾಂಧಿ ಅವರು ಎಮರ್ಜೆನ್ಸಿ ಘೋಷಿಸಿ, ಜನ ನಾಯಕರು ಜೈಲು ಸೇರಿ, ಜನರ ಹಕ್ಕುಗಳು ಮೊಟಕಾಗಿ, ಜನತಂತ್ರ ಕಗ್ಗೊಲೆಯಾದ ಗಳಿಗೆಗೆ ಸರಿಯಾಗಿ ನಲವತ್ತೈದು ವರ್ಷಗಳಾಗಿವೆ. ಇವತ್ತು ಆ ತುರ್ತು ಪರಿಸ್ಥಿತಿಯ ಬಹುಪಾಲು ಪಾತ್ರಧಾರಿಗಳಿಲ್ಲ. ಆದರೆ, ಅದರ ನೆನಪಿಗೆ ಮಾತ್ರ ಸಾವಿಲ್ಲ. ದೇಶದ ಭವಿಷ್ಯ ಭದ್ರವಾಗಿರಬೇಕಾದರೆ, ಆ ಕರಾಳ ದಿನಗಳ ನೆನಪು ಮತ್ತೆ ಮತ್ತೆ ಮಾಡಿಕೊಳ್ಳುವುದೇ ಒಳ್ಳೆಯದು.

ಪ್ರತಿಯೊಬ್ಬ ಭಾರತೀಯನೂ ಈ ಸತ್ಯವನ್ನು ತಿಳಿಯಬೇಕು, ಇಂದಿರಾ ಗಾಂಧಿ ಕುಟುಂಬ ತನ್ನ ಸ್ವಾರ್ಥ ರಾಜಕಾರಣಕ್ಕಾಗಿ ದೇಶವನ್ನೇ ಬಲಿಕೊಡಲು ಮುಂದಾದ ಇತಿಹಾಸದಲ್ಲಿ ಅಡಗಿ ಹೋಗಿರುವ ಆ ಕರಾಳ ಸತ್ಯ   

"ಇಂಡಿಯ ಎಮರ್ಜೆನ್ಸಿ"  ಸುಪ್ರೀಮ್ ಕೋರ್ಟ್ ಕೇಸ್ ನ ಸಂಪೂರ್ಣ ವಿವರ ಈ ವಿಡಿಯೋದಲ್ಲಿದೆ(Part-1)  ತಪ್ಪದೇ ನೋಡಿ !! 
ಭಾರತ ಮತ್ತೊಮ್ಮೆ ಆ ಕರಾಳ ಅಧ್ಯಾಯವನ್ನು ಕಾಣದಿರಬೇಕಾದರೆ ಆ ಅವಧಿಯ ಪರಿಚಯ-ನೆನಪು ಅತ್ಯಗತ್ಯ. ಈ ಆಪತ್ಕಾಲಿನ ಅವಧಿಯಲ್ಲಿ ದೇಶದ ಒಂದು ಲಕ್ಷ ನಲವತ್ತು ಸಾವಿರಕ್ಕೂ ಹೆಚ್ಚು ಭಾರತೀಯ ನಾಗರಿಕರು ಯಾವುದೇ ವಿಚಾರಣೆ ಇಲ್ಲದೇ ಜೈಲುವಾಸ ಅನುಭವಿಸಿದರು. 22 ತಿಂಗಳ ಆ ಅವಧಿಯಲ್ಲಿ. ಈ ರೀತಿ ಲಕ್ಷಾಂತರ ಜನ ಜೈಲುವಾಸಿಗಳಾದರೂ ದೇಶಕ್ಕೆ ಈ ಸುದ್ದಿಯೇ ಗೊತ್ತಾಗದಂತಹ ವ್ಯವಸ್ಥೆ ಇತ್ತು. ಎಲ್ಲಾ ಪತ್ರಿಕೆಗಳ ಸ್ವಾತಂತ್ರ್ಯವನ್ನು ಹರಣಮಾಡಿ, ಪತ್ರಿಕೆಗಳ ಸುದ್ದಿಯ ಮೇಲೆ ಸೆನ್ಸಾರ್‌ಶಿಪ್ ವಿಧಿಸಲಾಗಿದ್ದ ದುರ್ದೈವದ ಮಹಾಕಾಲ ಈ ತುರ್ತು ಪರಿಸ್ಥಿತಿ. ಜೂನ್ 25-26 ರಂದು ತುರ್ತು ಪರಿಸ್ಥಿತಿ ಘೋಷಣೆಯಾದಾಗ ದೆಹಲಿಯಲ್ಲಿ ದಿನ ಪತ್ರಿಕೆಗಳ ಕಾರ್ಯಾಲಯಗಳಿಗೆ ವಿದ್ಯುತ್ ಸರಬರಾಜನ್ನೇ ನಿಲ್ಲಿಸುವ ದಾಷ್ಟ್ಯದ ಕ್ರಮ ಕೈಗೊಳ್ಳಲಾಗಿತ್ತು.

"ಇಂಡಿಯ ಎಮರ್ಜೆನ್ಸಿ"  ಸುಪ್ರೀಮ್ ಕೋರ್ಟ್ ಕೇಸ್ ನ ಸಂಪೂರ್ಣ ವಿವರ ಈ ವಿಡಿಯೋದಲ್ಲಿದೆ(Part-2) ತಪ್ಪದೇ ನೋಡಿ !! 
ಈಗ ನಮಗೆ ನಗು ಬರಬಹುದು ಅಥವಾ ನಾವು ನಂಬದಿರಬಹುದು. ಆ ದಿನಗಳ ಹಿಂದಿ ಚಲನಚಿತ್ರಗಳ ಪ್ರಖ್ಯಾತ ಗಾಯಕ ಕಿಶೋರ್‌ಕುಮಾರ್ ಯುವ ಕಾಂಗ್ರೆಸಿನ ಸಮಾವೇಶ ಒಂದರಲ್ಲಿ ಹಾಡಲು ನಿರಾಕರಿಸಿದ್ದರಿಂದ ಆತನ ಎಲ್ಲಾ ಹಾಡುಗಳನ್ನು ಮತ್ತು ಅವರು ನಟಿಸಿದ ಚಲನಚಿತ್ರಗಳನ್ನು ಆಕಾಶವಾಣಿ-ದೂರದರ್ಶನದಲ್ಲಿ ಸಂಪೂರ್ಣವಾಗಿ ಪ್ರತಿಬಂಧಿಸಲಾಗಿತ್ತು. ಖ್ಯಾತ ಚಲನಚಿತ್ರ ಸಾಹಿತಿ-ನಿರ್ದೇಶಕ ಗುಲ್ಜಾರ್ ನಿರ್ದೇಶಿಸಿ 23 ಯಶಸ್ವಿ ವಾರಗಳನ್ನು ಪೂರೈಸಿದ್ದ ‘ಆಂಧಿ’ ಹಿಂದಿ ಚಲನಚಿತ್ರವನ್ನು ಸಹ ಪ್ರತಿಬಂಧಿಸಲಾಯಿತು. ಕಾರಣ ಆ ಚಿತ್ರದ ನಾಯಕಿಯ ಕಥೆ ದೇಶದ ಅಂದಿನ ಪ್ರಧಾನಮಂತ್ರಿ ಶ್ರೀಮತಿ ಇಂದಿರಾಗಾಂಧಿಯವರ ಜೀವನವನ್ನು ಹೋಲುತಿತ್ತು.ಸಂಸತ್ತಿನ ಲೋಕಸಭೆ-ರಾಜ್ಯಸಭೆಗಳು ಒಂದು ರೀತಿ ಆಟದ ವಸ್ತುಗಳಾಗಿ ಬಿಟ್ಟವು. ಶ್ರೀಮತಿ ಇಂದಿರಾ ಗಾಂಧಿ ಅವರ ಚುನಾವಣಾ ಫಲಿತಾಂಶ ನೀಡಿದ್ದ ನ್ಯಾಯಾಲಯದ ತೀರ್ಪುಗಳನ್ನು ಸಂವಿಧಾನದ ತಿದ್ದುಪಡಿಗಳ ಮೂಲಕ ನಗಣ್ಯ ಮಾಡಲಾಯಿತು. ಪ್ರಧಾನಮಂತ್ರಿ ಸ್ಥಾನವನ್ನು ರಾಷ್ಟ್ರಪತಿ-ಉಪರಾಷ್ಟ್ರಪತಿ ಸ್ಥಾನಗಳ ಜೊತೆಗೆ ಯಾವುದೇ ನ್ಯಾಯಾಲಯದ ತೀರ್ಪು ಬಾಧಿಸದಂತೆ ತಿದ್ದುಪಡಿ ತರಲಾಯಿತು. ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭೆಗಳ ಅವಧಿಯನ್ನು 5 ವರ್ಷಗಳಿಂದ 6 ವರ್ಷಗಳಿಗೆ ಹೆಚ್ಚಿಸಲಾಯಿತು. ರಾಜಕೀಯ ಖೈದಿಗಳನ್ನು ಅತ್ಯಂತ ಅಮಾನುಷವಾಗಿ ನಡೆಸಿಕೊಳ್ಳಲಾಯಿತು.

Thursday, March 7, 2019

ಶ್ರೀರಂಗಂ ದ್ವೀಪದ ಜಂಬುಕೇಶ್ವರ ದೇವಾಲಯ

ತಮಿಳುನಾಡಿನ ತಿರುಚಿನಾಪಳ್ಳಿಯ ಶ್ರೀರಂಗಂ ದ್ವೀಪದ ಜಂಬುಕೇಶ್ವರ ದೇವಾಲಯದ ಸುತ್ತ ಒಂದು ನೋಟ 


ಈ ದೇವಾಲಯವು ಪಂಚಭೂತ ಶಿವನ ದೇವಾಲಯಗಳಲ್ಲಿ ಒಂದಾಗಿದ್ದು, ಇಲ್ಲಿ ಪಾರ್ವತಿ ದೇವಿಯು ಶಿವಲಿಂಗವನ್ನು ನೀರಿನಿಂದ ಸೃಷ್ಟಿ ಮಾಡಿ ಪೂಜಿಸಿದಳೆಂದು ಸ್ಥಳ ಪುರಾಣವು ತಿಳಿಸುತ್ತದೆ. ಇಲ್ಲಿರುವ ಶಿವಲಿಂಗವು"ಅಪ್ ಲಿಂಗ"(ಜಲ ಲಿಂಗ) ವಾಗಿದ್ದು ,ಪಂಚಭೂತಗಳಲ್ಲಿ ಒಂದಾದ ಜಲ(ನೀರು) ವನ್ನು ಪ್ರತಿನಿಧಿಸುತ್ತದೆ. ಇದು ಸುಮಾರು 1800 ವರ್ಷಗಳ ಹಿಂದೆ, ಕೋಚೆಂಗನ್ನನ್ ಚೋಳ ಎಂಬ ರಾಜನು ನಿರ್ಮಿಸಿದನು.

ಪೌರಾಣಿಕ ಹಿನ್ನೆಲೆ :

ಒಮ್ಮೆ ಶಿವನ ಪತ್ನಿಯಾದ ಪಾರ್ವತಿ ದೇವಿಯು, ಶಿವನು ಲೋಕ ಕಲ್ಯಾಣಕ್ಕಾಗಿ ಮಾಡುತ್ತಿರುವ ತಪಸ್ಸನ್ನು ಹಾಸ್ಯ ಮಾಡಿದಳೆಂದು, ಅದರ ಪರಿಣಾಮವಾಗಿ ಶಿವನು ತನ್ನ ಪತ್ನಿಯನ್ನು ಭೂ ಲೋಕಕ್ಕೆ ತೆರಳಿ ತಪಸ್ಸು ಮಾಡಿ ಬರಬೇಕೆಂದು ತಿಳಿಸುತ್ತಾನೆ. ಪಾರ್ವತಿ ದೇವಿಯು ಅಖಿಲಾಂಡೇಶ್ವರಿ ಅವತಾರದಲ್ಲಿ ಭೂ ಲೋಕಕ್ಕೆ ಬಂದು ಜಂಬು ಅರಣ್ಯದಲ್ಲಿ, ಪೊನ್ನಿ (ಕಾವೇರಿ)ನದಿಯ ನೀರಿನಿಂದ ಶಿವಲಿಂಗವನ್ನು ಸೃಷ್ಟಿಸಿ ಒಂದು ಜಂಬು ಮರದ ಬುಡದಲ್ಲಿ ಅದನ್ನು ಪ್ರತಿಷ್ಠಾಪಸಿ ಆರಾಧಿಸಲು ಪ್ರಾರಂಭಿಸುತ್ತಾಳೆ. ಆಕೆಯ ಕಠಿಣ ತಪಸ್ಸಿಗೆ ಮೆಚ್ಚಿದ ಶಿವನು ಆಕೆಗೆ ತನ್ನ ದರ್ಶನವನ್ನಿತ್ತು, "ಶಿವ ಜ್ಞಾನ "ವನ್ನು ಉಪದೇಶ ನೀಡುತ್ತಾನೆ. ಅಖಿಲಾಂಡೇಶ್ವರಿಯು ಪೂರ್ವಾಭಿಮುಖವಾಗಿ ಉಪದೇಶ ಸ್ವೀಕರಿಸಿದರೆ, ಶಿವನು ಪಶ್ಚಿಮಾಭಿಮುಖವಾಗಿ ಉಪದೇಶ ನೀಡುತ್ತಾನೆ.